ಇಂದಿನ ಆಧುನಿಕ ಜಗತ್ತಿನಲ್ಲಿ ಮಾಹಿತಿಯ ಹೊರ ಹರಿವು ಅಧಿಕವಾಗಿರುವಾಗ ನಿರ್ದಿಷ್ಟ ವಸ್ತುವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟಸಾಧ್ಯ. ಒಂದೆಡೆ ಮನಸ್ಸಿಗೆ ಹೊಳೆದರೂ ಬಯಸಿದ್ದನ್ನೇ ನೆನಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ಅನೇಕ ವಲಯಗಳಿಂದ ಮಾಹಿತಿ ಸೋರಿಕೆಯಾದಾಗ ನಿಲುವು ಬದಲಿಸಿ ಬೇರೆಡೆಗೆ ಓಲುವುದು ಸರ್ವೇಸಾಮಾನ್ಯ. ಹೀಗಿರುವಲ್ಲಿ ಮೌಲ್ಯಧಾರಿತ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಅವಶ್ಯವಾಗಿದೆ. ಕೇವಲ ಜಾಹಿರಾತಿನಿಂದ ಈ ಉತ್ಪನ್ನವನ್ನು ಜಗಜ್ಜಾಹಿರಾಗಿಸಲು ಸಾಧ್ಯವಿಲ್ಲ. ಜಾಹಿರಾತಿನೊಂದಿಗೆ ಖರೀದಿ ಮಾಡುವ ವಸ್ತುವಿನ ನೈಜ ಅನುಭವವನ್ನು ಗ್ರಾಹಕರಿಗೆ ತಲುಪಿಸಲು ವಸ್ತುಪ್ರದರ್ಶನ, ಮಾಹಿತಿ ಕಾರ್ಯಗಾರಗಳು, ಮೇಳಗಳ ಹಾಗೂ ಸಮ್ಮೇಳನಗಳ ಮೂಲಕ ಉತ್ಪನ್ನವನ್ನು ಪರಿಚಯಿಸುವ ಹಾಗೂ ಪ್ರಚುರಪಡಿಸುವ ಅವಶ್ಯಕತೆ ಅಧಿಕವಾಗಿದೆ.
ಈ ವಿಭಾಗದಲ್ಲಿ ಮಾರಾಟಗಾರರಿಗೆ ಬಂದೊದಗುವ ಕೊರತೆಯನ್ನು ನೀಗಿಸಲು ಸ್ಪೀಯರ್ ಹೆಡ್ ಮೀಡಿಯಾ ಸಂಸ್ಥೆಯು ‘ವಿಟ್ರಿಯ’ ಎಂಬ ಬ್ರ್ಯಾಂಡ್ ನೊಂದಿಗೆ ವ್ಯವಹಾರವನ್ನು ಸುಲಲಿತಗೊಳಿಸಲು ಇವೆಂಟ್ ಮ್ಯಾನೆಂಜ್ ಮೆಂಟ್ ಕ್ಷೇತ್ರದಲ್ಲಿ, ಸದರಿ ಆರ್ಥಿಕ ವರ್ಷದಲ್ಲಿ ಪಾದಾರ್ಪಣೆ ಮಾಡಲಿದೆ. ವಿಡೀಯೋಗ್ರಾಫಿ, ಛಾಯಾಚಿತ್ರಣ ಸಹಾಯದೊಂದಿಗೆ ಕರ್ನಾಟಕದಾದ್ಯಂತ ವ್ಯವಹಾರಸ್ಥರಿಗೆ ಇವೆಂಟ್ ಮ್ಯಾನೆಂಜ್ ಮೆಂಟ್ ಸಲಹೆಗಳನ್ನು ನೀಡಿ ಹಾಗೂ ಮಾರಾಟಗಾರರ ಅವಶ್ಯಕತೆಗಳನ್ನು ನೀಗಿಸಲು ತನ್ನ ಸೇವೆಯನ್ನು ಮೀಸಲಿಡಲಿದೆ.