ಇಂದಿನ ವ್ಯವಹಾರಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನಸ್ಸಿಗೆ ತಟ್ಟುವಂತಹ ರೀತಿಯಲ್ಲಿ ಕಥಾರೂಪದಲ್ಲಿ ವಸ್ತು ಸಾರಂಶವನ್ನು ಗ್ರಾಹಕರಿಗೆ ತಲುಪಿಸುವುದು ಅತ್ಯವಶ್ಯ. ನೆನಪು ಮಾಸುವ ಮುನ್ನವೇ ವ್ಯವಹಾರವನ್ನು ಕುದುರಿಸಿ ಲಾಭ ಗಳಿಸಲು ಮುನ್ನುಗ್ಗುವವರು ಅನೇಕರು. ಆದಾಗ್ಯೂ, ವ್ಯವಹಾರಸ್ಥರ ನಿರ್ದಿಷ್ಟ ಬಯಕೆಗಳಿಗೆ ಸ್ಪಂದಿಸಿ, ವ್ಯವಹಾರ ವೃದ್ದಿಸಲು ವೆಬ್ ಟಿವಿ ಎಂಬ ವಿನೂತನ ಯೋಜನೆಯನ್ನುಸಾದರಪಡಿಸುತ್ತಿದ್ದೇವೆ.. 2018ರಲ್ಲಿ ಇದನ್ನು ಕಾರ್ಯರೂಪಗೊಳಿಸಲು ಉದ್ದೇಶಿಸಿರುವ ಸ್ಪೀಯರ್ ಹೆಡ್ ಸಂಸ್ಥೆಯು ಕಥಾ, ಸಾಕ್ಷ್ಯಚಿತ್ರ ಹಾಗೂ ಮುಂದೊಂದು ದಿನ ಅವಶ್ಯವಿದ್ದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಚಲನಚಿತ್ರ ರೂಪದಲ್ಲಿ ಗ್ರಾಹಕರನ್ನು ತಮ್ಮವರನ್ನಾಗಿಸಲು ಅನುವು ಮಾಡಿಕೊಡುವ ಗುರಿ ಹೊಂದಿದ್ದೇವೆ. ಡಿಜಿಟಲ್ ಮಾಧ್ಯಮ ಕ್ಷೇತ್ರವು ಕೂಡ ಇದರೆಡೆಗೆ ಒತ್ತು ನೀಡುತ್ತಿದೆ.